ಅಭಿಪ್ರಾಯ / ಸಲಹೆಗಳು

ಇಲಾಖಾ ಇತಿಹಾಸ

ತರಬೇತಿ ವಿಭಾಗ

ಎರಡನೇ ಮಹಾಯುದ್ಧದ ತರುವಾಯ ಸೈನಿಕರಿಗೆ ಪುನರ್ ವಸತಿ ಕಲ್ಪಿಸುವ ಉದ್ದೇಶದಿಂದ ೧೯೫೬ ರಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆಯಡಿಯಲ್ಲಿ ಐದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು (ಬೆಂಗಳೂರು, ಕೆ.ಜಿ.ಎಫ್. ಭದ್ರಾವತಿ, ವಿಜಯಪುರ ಮತ್ತು ಬಳ್ಳಾರಿ) ಸ್ಥಾಪನೆಗೊಂಡವು. 

ಕೈಗಾರಿಕೆಗಳ ಬೇಡಿಕೆಗಳ ಅನುಸಾರ ೧೯೭೦ ರಲ್ಲಿ ಖಾಸಗಿ ವಲಯದಲ್ಲಿಯೂ ಕೈಗಾರಿಕಾ ತರಬೇತಿ ಸಂಸ್ಥೆಗಳು ತಲೆ ಎತ್ತಿದವು.

ತದನಂತರ ೧೯೯೧ ರವರೆಗೆ ೩೪ ಸಂಸ್ಥೆಗಳು ಸ್ಥಾಪನೆಗೊಂಡು ಕೈಗಾರಿಕೆಗಳಿಗೆ ಕುಶಲ ಕರ್ಮಿಗಳನ್ನು ಒದಗಿಸುವ ಕಾರ್ಯದಲ್ಲಿ ಸಫಲತೆ ಪಡೆಯಿತು.  ೧೯೯೨ ರಲ್ಲಿ ಮಹಿಳೆಯರಿಗಾಗಿಯೇ ವಿಶೇಷವಾಗಿ ವಿಶ್ವಬ್ಯಾಂಕ್ ನೆರವಿನೊಂದಿಗೆ ೧೦ ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪನೆಗೊಂಡವು. ಹಂತಹAತವಾಗಿ ಕೈಗಾರಿಕೆಗಳ ಬೇಡಿಕೆಗಳಿಗನುಗುಣವಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ವರ್ಷ ವರ್ಷವೂ ಸ್ಥಾಪನೆ ಮಾಡಿ ೨೦೦೦ ಇಸವಿಯಲ್ಲಿ ರಾಜ್ಯದಲ್ಲಿ ಈ ಇಲಾಖೆ ಅಡಿಯಲ್ಲಿ ಒಟ್ಟು ೯೫ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ೧೪೦ ಖಾಸಗೀ ಕೈಗಾರಿಕಾ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸತೊಡಗಿದವು. 

                ೨೦೦೦ ಇಸವಿಯಿಂದ ೨೦೦೮ ರ ವೇಳೆಗೆ ೬೩ ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಪ್ರಾರಂಭಗೊAಡು ಗ್ರಾಮೀಣ ಭಾಗದ ಯುವ ಜನತೆಗೆ ವಿವಿಧ ವೃತ್ತಿಗಳಲ್ಲಿ ಕೌಶಲ್ಯ ತರಬೇತಿ ನೀಡುವಲ್ಲಿ ಯಶಸ್ವಿಯಾಯಿತು.

                ೨೦೧೪ ರಲ್ಲಿ ರಾಜ್ಯದ ತಾಲ್ಲೂಕು ಕೇಂದ್ರ, ಹಿಂದುಳಿದ ಹಾಗೂ ಅತೀ ಹಿಂದುಳಿದ ಪ್ರದೇಶಗಳಲ್ಲಿ ಹೊಸದಾಗಿ ೧೦೦ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಿ ಎಲ್ಲಾ ಭಾಗದ ಯುವ ಜನತೆಗೆ ಕೌಶಲ್ಯ ತರಬೇತಿ ಪಡೆಯಲು ಹೆಚ್ಚಿನ ಅವಕಾಶ ಕಲ್ಪಿಸಿ ಇಲಾಖೆಯು ಮೈಲುಗಲ್ಲು ಸಾಧಿಸಿದೆ.

೨೦೧೭ ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿಯೂ ಕೌಶಲ್ಯ ತರಬೇತಿ ನೀಡುವ ಸಲುವಾಗಿ ೧೨ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸ್ಥಾಪನೆಯೊಂದಿಗೆ ಪ್ರಸ್ತುತ ರಾಜ್ಯದಲ್ಲಿ ಒಟ್ಟು ೨೭೦ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ 1231 ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು ತರಬೇತಿ ನೀಡುತ್ತಿವೆ.

೨೦೦೫-೦೬ ನೇ ಸಾಲಿನಿಂದ ೩೬ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸಿ.ಒ.ಇ. ಅಡಿಯಲ್ಲಿ ಹಾಗೂ ೨೦೦೭-೦೮ನೇ ಸಾಲಿನಿಂದ ೭೬ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಿ.ಪಿ.ಪಿ. ಅಡಿಯಲ್ಲಿ ಉನ್ನತೀಕರಿಸಲಾಯಿತು.

೨೦೧೬-೧೭ನೇ ಸಾಲಿನಲ್ಲಿ ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯು ಸ್ಥಾಪನೆಗೊಂಡ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗ ಮತ್ತು ತರಬೇತಿ ಇಲಾಖೆಯು ಕೌಶಲ್ಯಾಭಿವೃದ್ಧಿ ಇಲಾಖೆಯ ಅಡಿ ೨೦೧೭-೧೮ ನೇ ಸಾಲಿನಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯೆಂದು ಮರು ನಾಮಕರಣ ಮಾಡಲಾಯಿತು.

೨೦೨೦-೨೧ನೇ ಸಾಲಿನಲ್ಲಿ ೧೫೦ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಟಾಟಾ ಟೆಕ್ನಾಲಜೀಸ್ ಸಹಯೋಗದೊಂದಿಗೆ ಉನ್ನತೀಕರಿಸಿ ಆಧುನಿಕ ತಂತ್ರಜ್ಞಾನದ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತಿದೆ.

 

ಉದ್ಯೋಗ:

ಎರಡನೇ ಮಹಾಯುದ್ದದ ನಂತರ ಹಿಂತಿರುಗುತ್ತಿದ್ದ ಸೈನಿಕರು ಹಾಗೂ ಯುದ್ದ-ಸಂಬಂಧಿ ನೌಕರರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ 1945 ರಲ್ಲಿ ಉದ್ಯೋಗ ವಿನಿಮಯ ಕಛೇರಿಗಳನ್ನು ತೆರೆಯಲಾಯಿತು. ನಂತರ 1948 ರಲ್ಲಿ ಈ ಉದ್ಯೋಗ ವಿನಿಮಯ ಕಛೇರಿಗಳನ್ನು ಸಾರ್ವಜನಿಕರಿಗೂ ವಿಸ್ತರಿಸಲಾಯಿತು.

ಪ್ರಾರಂಭದಲ್ಲಿ ಉದ್ಯೋಗ ವಿನಿಮಯ ಕಛೇರಿಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ. ನವೆಂಬರ್‌ 1, 1956 ರ ನಂತರ ರಾಜ್ಯಗಳ ಯೋಜನೆ ಮತ್ತು ಕಾರ್ಯಕ್ರಮಗಳಿಗನುಗುಣವಾಗಿ ದೈನಂದಿನ ಉದ್ಯೋಗ ಸೇವೆಗಳ ಚಟುವಟಿಕೆಗಳನ್ನು ನಿರ್ವಹಿಸಲು ಉದ್ಯೋಗ ವಿನಿಮಯ ಕಛೇರಿಗಳನ್ನು ಆಯಾ ರಾಜ್ಯಗಳಿಗೆ ವರ್ಗಾಯಿಸಲಾಯಿತು. ಆದರೆ, ರಾಷ್ಟ್ರಾವ್ಯಾಪಿ ಕಾರ್ಯವಿಧಾನದಲ್ಲಿ ಏಕರೂಪತೆ ಸಾಧಿಸಲು  ನೀತಿಗಳನ್ನು ರೂಪಿಸುವ ಹಾಗೂ ಉದ್ಯೋಗ ವಿನಿಮಯ ಕಛೇರಿಗಳ ಸಿಬ್ಬಂದಿಗಳ ತರಬೇತಿ ಹಾಗೂ ಕಾರ್ಯನಿರ್ವಹಣೆಗೆ ಸಂಬಂಧಪಟ್ಟ ವಿಷಯಗಳ ನಿರ್ವಹಣಾ ಜವಾಬ್ದಾರಿಯು ಕೇಂದ್ರ ಸರ್ಕಾರದ ಬಳಿಯೇ ಉಳಿದಿರುತ್ತದೆ. ಭಾರತವು ಐ.ಎಲ್‌.ಓ ಕನ್ವೆನ್ಷನ್-88 ರ ಭಾಗವಾಗಿರುವುದರಿಂದ ಜನತೆಗೆ ಉಚಿತವಾಗಿ ಉದ್ಯೋಗ ನೀಡಲು ಬದ್ದವಾಗಿರುತ್ತದೆ.

ಕರ್ನಾಟಕದಲ್ಲಿನ ಉದ್ಯೋಗ ಸೇವೆ:

ಉದ್ಯೋಗ ವಿನಿಮಯ ಕಛೇರಿಯು ಬೆಂಗಳೂರಿನಲ್ಲಿ ಮೊದಲ ಬಾರಿಗೆ 1945 ರಲ್ಲಿ ಪ್ರಾರಂಭಗೊಂಡಿದ್ದು, ರಾಜ್ಯಗಳು 1956 ರಲ್ಲಿ ಪುನರ್‌ವಿಂಗಡನೆಗೊಂಡ ನಂತರ ಹಂತ ಹಂತವಾಗಿ ರಾಜ್ಯದ ಇತರೆ ಭಾಗಗಳಲ್ಲೂ ಉದ್ಯೋಗ ವಿನಿಮಯ ಕಛೇರಿಗಳನ್ನು ತೆರೆಯಲಾಯಿತು. ಪ್ರಸ್ತುತ, ರಾಜ್ಯದಲ್ಲಿ ಒಟ್ಟು 34 ಉದ್ಯೋಗ  ವಿನಿಮಯ ಕಛೇರಿಗಳು ಹಾಗೂ 6 ವಿಶ್ವ ವಿದ್ಯಾಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುತ್ತವೆ.

ಇತ್ತೀಚಿನ ನವೀಕರಣ​ : 21-06-2022 05:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080