ಅಭಿಪ್ರಾಯ / ಸಲಹೆಗಳು

ರಾಷ್ಟ್ರೀಯ ವೃತ್ತಿ ಸೇವೆ

NCS ರಾಷ್ಟ್ರೀಯ ವೃತ್ತಿ ಸೇವೆ ಜಾಲತಾಣ:

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ವತಿಯಿಂದ ರಾಷ್ಟ್ರೀಯ ವೃತ್ತಿ ಸೇವೆ ಯೋಜನೆಯನ್ನು ಅಳವಡಿಸಿ ದೇಶಾದ್ಯಾಂತ ಉದ್ಯೋಗ ವಿನಿಮಯ ಕೇಂದ್ರಗಳನ್ನು ವೃತ್ತಿ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ. ಇದರ ಅಡಿಯಲ್ಲಿ ರಾಷ್ಟ್ರೀಯ ವೃತ್ತಿ ಸೇವೆ ಜಾಲತಾಣ ಅಭಿವೃದ್ಧಿ ಪಡಿಸಿದ್ದು ಈ ಕೆಳಕಂಡ ಪ್ರಮುಖ ಸೇವೆಗಳನ್ನು ಒದಗಿಸಲಾಗುತ್ತಿದೆ.

  1. ಆನ್-ಲೈನ್ ನೋಂದಣಿ
  2. ವೃತ್ತಿ ಸಮಾಲೋಚನೆ.
  3. ಉದ್ಯೋಗ ಒದಗಿಸುವಿಕೆ.

ಈ ಜಾಲತಾಣದಲ್ಲಿ ಹಲವು ವೃತ್ತಿ ವಿಷಯಗಳ ಬಗ್ಗೆ ವಿಸ್ತøತ ಮಾಹಿತಿ ಇದ್ದು, ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ವಿವಿದ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂಧಿ ವರ್ಗದವರು, ವೃತ್ತಿ ಸಮಾಲೋಚಕರು, ಉದ್ಯೋಗದಾತರು, ಕೌಶಲ್ಯ ತರಬೇತುದಾರರು ಹಾಗೂ ಇತರೆ ಫಲಾನುಭವಿಗಳು ಇದರ ಪ್ರಯೋಜನ ಪಡೆಯ ಬಹುದಾಗಿದೆ. ಈ ಜಾಲತಾಣವು ವಿವಿಧ ಉದ್ಯೋಗ/ವೃತ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮತ್ತು ನಿಖರವಾದ ಮಾಹಿತಿ ಓದಗಿಸುವ ಜಾಲತಾಣವಾಗಿರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ವಿಷಯದ ಮಾಹಿತಿ ಹಾಗೂ ಅವಕಾಶಗಳನ್ನು ಒದಗಿಸುವ ಅತಿ ದೊಡ್ಡ ಜಾಲತಾಣವಾಗಿರುತ್ತದೆ.

MCC ಮಾದರಿ ವೃತ್ತಿ ಕೇಂದ್ರಗಳು:


ಉದ್ಯೋಗ ಮಹಾನಿರ್ದೇಶನಾಲಯವು, ಶೇ.100ರ ಕೇಂದ್ರ ಸರ್ಕಾರದ ಅನುದಾನ ಒದಗಿಸಿ 200 ಮಾದರಿ ವೃತ್ತಿ ಕೇಂದ್ರಗಳನ್ನು ಸ್ಧಾಪಿಸಿದ್ದು, ಸುಧಾರಿತ ತಂತ್ರಜ್ಞಾನ ಆಧಾರಿತ ಉದ್ಯೋಗ ಸೇವೆಗಳು ಹಾಗೂ ವೃತ್ತಿಪರ ಸಹಾಯ ಒದಗಿಸುವ ಮೂಲಕ ಈ ಮಾದರಿ ವೃತ್ತಿ ಕೇಂದ್ರಗಳು ದೇಶಾದ್ಯಂತ ಆಯ್ದ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಉದ್ಯೋಗಾಕಾಂಕ್ಷಿಗಳಿಗೆ ವೃತ್ತಿ/ಉದ್ಯೋಗ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಸೇವೆಗಳಾದ ವೃತ್ತಿ ಸಮಾಲೋಚನೆ, ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ, Apprenticeship ಬಗ್ಗೆ ಮಾಹಿತಿ ಸೇರಿದಂತೆ ಇನ್ನೂ ಹಲವಾರು ವಿಷಯಗಳಿಗೆ ಸಹಾಯ ಒದಗಿಸಲಾಗುತ್ತಿದೆ. ಸ್ವಯಂ ಮೌಲ್ಯ ಮಾಪನ, Psychometric Test ಹಾಗೂ ಒಳನೋಟಗಳನ್ನು ಬಳಸಿ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತವಾದ ವೃತ್ತಿ ಆಯ್ಕೆ ಮಾಡಿಕೊಳ್ಳಲು ಮಾದರಿ ವೃತ್ತಿ ಕೇಂದ್ರದ ಸಮಾಲೋಚಕರು, Young Professional ಅಧಿಕಾರಿಗಳಿಂದ ಸಹಾಯ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಮಾದರಿ ವೃತ್ತಿ ಕೇಂದ್ರಗಳು ವಿವಿಧ ಇಲಾಖೆಗಳು, ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು, ಸ್ಥಳೀಯ ಕೈಗಾರಿಕೆಗಳು, ಉದ್ಯೋಗದಾತರು, ವೃತ್ತಿ ಸಮಾಲೋಚಕರು, ಕೌಶಲ್ಯ ತರಬೇತುದಾರರು ಈ ಎಲ್ಲಾ ಫಲಾನುಭವಿಗಳಿಗೆ ದೊಡ್ಡ ವೇದಿಕೆ ಯಾಗಿದ್ದು, ಇದರ ಪ್ರಯೋಜನ ಪಡೆಯ ಬಹುದಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಈ ಕೆಳಕಂಡ ಒಟ್ಟು 9 ಮಾದರಿ ವೃತ್ತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
1. ಮೈಸೂರು
2. ಹಾಸನ
3. ಹುಬ್ಬಳ್ಳಿ-ಧಾರವಾಡ
4. ಕಲಬುರಗಿ
5. ತುಮಕೂರು
6. ಕೋಲಾರ
7. ದಾವಣಗೆರೆ
8. ಬಳ್ಳಾರಿ
9. ಮಂಗಳೂರು


ಈ ಜಿಲ್ಲೆಗಳಲ್ಲದೆ ಅಕ್ಕ ಪಕ್ಕದ ಜಿಲ್ಲೆಯ ಫಲಾನುಭವಿಗಳೂ ಸಹ ಸಮೀಪದ ಮಾದರಿ ವೃತ್ತಿ ಕೇಂದ್ರಕ್ಕೆ ಭೇಟಿ ನೀಡಿ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.

 

ಇತ್ತೀಚಿನ ನವೀಕರಣ​ : 03-06-2022 04:46 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080